Highlights
- ಕರ್ನಾಟಕ ಪರಿಶಿಷ್ಟ ಜಾತಿಯ ವಿವಾಹ ಸಹಾಯ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ಕರ್ನಾಟಕದ ವಧುಗಳಿಗೆ ಈ ಕೆಳಗಿನ ಆರ್ಥಿಕ ನೆರವು ನೀಡಲಾಗುವುದು :-
- ಆರ್ಥಿಕ ನೆರವು ರೂ. 50,000/- ಕರ್ನಾಟಕದ ಪರಿಶಿಷ್ಟ ಜಾತಿಯ ವಧುಗಳ ಮದುವೆಗೆ.
Customer Care
- ಕರ್ನಾಟಕ ಪರಿಶಿಷ್ಟ ಜಾತಿ ವಿವಾಹ ನೆರವು ಯೋಜನೆ ಸಹಾಯವಾಣಿ ಸಂಖ್ಯೆ :- 09480843005.
- ಕರ್ನಾಟಕ ಪರಿಶಿಷ್ಟ ಜಾತಿ ವಿವಾಹ ನೆರವು ಯೋಜನೆ ಸಹಾಯವಾಣಿ ಇಮೇಲ್ :- helpwkar@gmail.com.
ಯೋಜನೆಯ ವಿವರಣೆ
|
|
---|---|
ಯೋಜನೆಯ ಹೆಸರು | ಕರ್ನಾಟಕ ಪರಿಶಿಷ್ಟ ಜಾತಿ ವಿವಾಹ ಸಹಾಯ ಯೋಜನೆ. |
ದಿನಾಂಕ | 2015. |
ಪ್ರಯೋಜನಗಳು | ಕರ್ನಾಟಕ ವಧುಗಳಿಗೆ ರೂ.50 ,000/- ಆರ್ಥಿಕ ಸಹಾಯ |
ಫಲಾನುಭವಿಯರು | ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗೆ ಸೇರಿದ ವಧುಗಳು. |
ನೋಡಲ್ ಡಿಪಾರ್ಟ್ಮೆಂಟ್ | ಸಮಾಜ ಕಲ್ಯಾಣ ಕಮಿಷನರೇಟ್, ಕರ್ನಾಟಕ ಸರ್ಕಾರ. |
ಚಂದಾದಾಯಿಗೆ | ಯೋಜನೆಗೆ ಸಂಬಂಧಿಸಿದಂತೆ ನವೀಕರಣವನ್ನು ಪಡೆಯಲು ಇಲ್ಲಿ ಚಂದಾದಾರರಾಗಿ. |
ಅರ್ಜಿ ಸಲ್ಲಿಸುವ ವಿಧಾನ | ಕರ್ನಾಟಕ ಪರಿಶಿಷ್ಟ ಜಾತಿಯ ಮದುವೆ ಸಹಾಯ ಯೋಜನೆ ಆನ್ಲೈನ್ ಅಪ್ಲಿಕೇಶನ್. |
ಯೋಜನೆಯ ಪರಿಚಯ
- ಹುಡುಗಿಯ ವಿವಾಹವು ದುಬಾರಿ ಪ್ರಸಂಗವಾಗಿದ್ದು, ಅದನ್ನು ಸಂತೋಷದಿಂದ ಮಾಡಲು ಸಾಕಷ್ಟು ಹಣ ಬೇಕಾಗುತ್ತದೆ.
- ಆದರೆ ಕರ್ನಾಟಕದ ಬಹಳಷ್ಟು ಕುಟುಂಬಗಳು ಕಡಿಮೆ ಆದಾಯದ ಗುಂಪು ಮತ್ತು ಆರ್ಥಿಕ ಸಹಾಯ ಬೇಕಾಗುವ ವರ್ಗಕ್ಕೆ ಸೇರಿದಂತಿವೆ.
- ಈಕಾರಣ ಕರ್ನಾಟಕ ಸರ್ಕಾರ ಮದುವೆ ಸಹಾಯ ಯೋಜನೆಯಡಿ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗೆ ಸೇರಿದಂತ ವಧುಗಳಿಗೆ ಆರ್ಥಿಕ ಸಹಾಯವನ್ನು ನೀಡಲು ಸಜ್ಜಾಗಿದೆ.
- ಈ ಯೋಜನೆಯ 2015 ರಿಂದ ಪ್ರಾರಂಭವಾಗಿದೆ.
- ಈ ಯೋಜನೆಯ ಮುಖ್ಯ ಉದ್ದೇಶವೇನೆಂದರೆ, ಪರಿಶಿಷ್ಟ ಜಾತಿವಾದುಗಳಿಗೆ ಆರ್ಥಿಕ ಸಹಾಯ ನೀಡುವುದು.
- ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಕಮಿಷನರೇಟ್ ಈ ಯೋಜನೆಯ ನೋಡಲ್ ಡಿಪಾರ್ಟ್ಮೆಂಟ್ ಆಗಿದೆ.
- ಕರ್ನಾಟಕ ಪರಿಶಿಷ್ಟ ಜಾತಿ ವಿವಾಹ ನೆರವು ಯೋಜನೆಯಡಿ, ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ವಧುಗಳಿಗೆ ರೂ. 50,000/- ಆರ್ಥಿಕ ಸಹಾಯ ಒದಗಿಸಲಿದೆ.
- ಪರಿಶಿಷ್ಟ ಜಾತಿಗೆ ಸೇರಿದಂತ ವಧು-ವರರು ಮಾತ್ರ ಈ ಯೋಜನೆ ಆರ್ಥಿಕ ಸಹಾಯವನ್ನು ಪಡೆಯಲು ಅರ್ಹರು.
- ವಧುವಿನ ವಾರ್ಷಿಕ ಕುಟುಂಬದ ಆದಾಯವು ರೂ. 2,00,000/- ಗಿಂತ ಕಡಿಮೆಯಿರಬೇಕು.
- 11/08/2015 ರ ನಂತರ ಆದ ಮದುವೆಗಳು ಮಾತ್ರ ಈ ಯೋಜನೆಯಡಿ ಆರ್ಥಿಕ ಸಹಾಯವನ್ನು ಪಡೆಯಬಹುದು.
- ಮದುವೆಯಾದ ಮೊದಲನೇ ಒಂದು ವರ್ಷದಲ್ಲಿ ಅರ್ಜಿಯನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
- ಒಂದು ವರ್ಷದ ನಂತರ ಸಲ್ಲಿಸಿರುವ ಅರ್ಜಿ ಯಾವುದೇ ಸ್ವರೂಪದಲ್ಲಿ ಸ್ವೀಕರಿಸುವುದಿಲ್ಲ.
- ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಮದುವೆ ಸಹಾಯ ಯೋಜನೆಯ ಅರ್ಜಿಯನ್ನು ಸಲ್ಲಿಸಲು ಮದುವೆ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ.
- ಅರ್ಹ ಫಲಾನುಭವಿಯರು ಆನ್ಲೈನ್ ಮೂಲಕ ಪರಿಶಿಷ್ಟ ಜಾತಿ ಮದುವೆ ಸಹಾಯ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಬಹುದು.
ಪ್ರಯೋಜನಗಳು
- ಕರ್ನಾಟಕ ಪರಿಶಿಷ್ಟ ಜಾತಿಯ ವಿವಾಹ ಸಹಾಯ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ಕರ್ನಾಟಕದ ವಧುಗಳಿಗೆ ಈ ಕೆಳಗಿನ ಆರ್ಥಿಕ ನೆರವು ನೀಡಲಾಗುವುದು :-
- ಆರ್ಥಿಕ ನೆರವು ರೂ. 50,000/- ಕರ್ನಾಟಕದ ಪರಿಶಿಷ್ಟ ಜಾತಿಯ ವಧುಗಳ ಮದುವೆಗೆ.
ಅರ್ಹತೆ
- ಕರ್ನಾಟಕ ರಾಜ್ಯದ ಕಾಯಂ ನಿವಾಸಿ.
- ಪರಿಶಿಷ್ಟ ಜಾತಿ ವರ್ಗದ ವಧು ಹಾಗೂ ವರಗಳು.
- 11-08-2015 ರ ನಂತರ ಮದುವೆ ನಡೆಯಬೇಕು.
- ಮಧು ಕುಟುಂಬದ ವಾರ್ಷಿಕ ಆದಾಯ ರೂ.2,00,000/- ಗಿಂತ ಕಡಿಮೆ ಇರಬೇಕು.
- ಮದುವೆಯ 1 ವರ್ಷದೊಳಗೆ ಅರ್ಜಿಯನ್ನು ಸಲ್ಲಿಸಬೇಕು.
ಅಗತ್ಯವಾದ ದಾಖಲೆಗಳು
- ಕರ್ನಾಟಕದ ನಿವಾಸಿಯಾದ ಪ್ರಮಾಣ ಪತ್ರ.
- ವಧು ಮತ್ತು ವರನ ಆಧಾರ್ ಕಾರ್ಡ್.
- ಜಾತಿ ಪ್ರಮಾಣ ಪತ್ರ.
- ಆದಾಯ ಪ್ರಮಾಣಪತ್ರ.
- ಬ್ಯಾಂಕ್ ಖಾತೆ ವಿವರಗಳು.
- ಮದುವೆಯ ಛಾಯಾಚಿತ್ರ.
- ಮದುವೆ ಪ್ರಮಾಣಪತ್ರ.
- ಮೊಬೈಲ್ ನಂಬರ.
ಅರ್ಜಿಯನ್ನು ಸಲ್ಲಿಸುವ ವಿಧಾನ
- ಕರ್ನಾಟಕ ಪರಿಶಿಷ್ಟ ಜಾತಿ ಮದುವೆ ಸಹಾಯ ಯೋಜನೆಯಡಿಯರ್ಜಿಯನ್ನು ಸಲ್ಲಿಸುವ ಏಕೈಕ ರೂಪ ಆನ್ಲೈನ್ ಅಪ್ಲಿಕೇಶನ್ ನಮೂನೆಯಾಗಿದೆ.
- ವಧು ವರರು ತಮ್ಮ ಆಧಾರ್ ಸಂಖ್ಯೆಯ ಮೂಲಕ ಈ ಯೋಜನೆಯಡಿ ನೊಂದಾಯಿಸಬಹುದು.
- ನೋಂದಣಿಯ ನಂತರ ವಧು ವರರು ತಮ್ಮ ವಿವರಗಳನ್ನು.
- ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿ.
- ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಿ.
- ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಿ ಮತ್ತು ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
- ಸ್ವೀಕೃತಿ ರಶೀದಿಯನ್ನು ಮುದ್ರಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಅದನ್ನು ಸುರಕ್ಷಿತಗೊಳಿಸಿ.
- ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಪರಿಶೀಲನೆಗಾಗಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗೆ ರವಾನಿಸಲಾಗುತ್ತದೆ.
- ಪರಿಶೀಲನೆಯ ನಂತರ, ಕರ್ನಾಟಕ ಅನುಸೂಚಿತ ಜಾತಿ ವಿವಾಹ ಸಹಾಯ ಯೋಜನೆಯಡಿ ಆರ್ಥಿಕ ಸಹಾಯವನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
ಅಗತ್ಯವಾದ ಲಿಂಕ್ಸ್
- ಕರ್ನಾಟಕ ಪರಿಶಿಷ್ಟ ಜಾತಿ ವಿವಾಹ ನೆರವು ಯೋಜನೆ ನೋಂದಣಿ.
- ಕರ್ನಾಟಕ ಪರಿಶಿಷ್ಟ ಜಾತಿ ವಿವಾಹ ಸಹಾಯ ಯೋಜನೆ ಲಾಗಿನ್.
- ಕರ್ನಾಟಕ ಪರಿಶಿಷ್ಟ ಜಾತಿ ವಿವಾಹ ನೆರವು ಯೋಜನೆ ಸ್ವೀಕೃತಿ ರಶೀದಿ ಮುದ್ರಣ.
- ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ.
- ಕರ್ನಾಟಕ ಪರಿಶಿಷ್ಟ ಜಾತಿ ವಿವಾಹ ನೆರವು ಯೋಜನೆ ಮಾರ್ಗಸೂಚಿಗಳು.
ಸಂಪರ್ಕ ವಿವರಣೆ
- ಕರ್ನಾಟಕ ಪರಿಶಿಷ್ಟ ಜಾತಿ ವಿವಾಹ ನೆರವು ಯೋಜನೆ ಸಹಾಯವಾಣಿ ಸಂಖ್ಯೆ :- 09480843005.
- ಕರ್ನಾಟಕ ಪರಿಶಿಷ್ಟ ಜಾತಿ ವಿವಾಹ ನೆರವು ಯೋಜನೆ ಸಹಾಯವಾಣಿ ಇಮೇಲ್ :- helpwkar@gmail.com.
- ಸಮಾಜ ಕಲ್ಯಾಣ ಇಲಾಖೆಯ ಕಮಿಷನರೇಟ್, ಕೇರಳ ಸರ್ಕಾರ,
5 ನೇ ಮಹಡಿ, MS ಕಟ್ಟಡ,
ಡಾ. ಅಂಬೇಡ್ಕರ್ ವೀಧಿ,
ಬೆಂಗಳೂರು, ಕರ್ನಾಟಕ - 560001.
Also see
Scheme Forum
Caste | Person Type | Scheme Type | Govt |
---|---|---|---|
Matching schemes for sector: Marriage
Sno | CM | Scheme | Govt |
---|---|---|---|
1 | ಕರ್ನಾಟಕ ಅಂತರ್ ಜಾತಿ ವಿವಾಹ ಸಹಾಯ ಯೋಜನೆ | ಕರ್ನಾಟಕ | |
2 | ಕರ್ನಾಟಕ SC ವಿಧವೆಯ ಮರು-ವಿವಾಹ ಸಹಾಯ ಯೋಜನ | ಕರ್ನಾಟಕ | |
3 | ಕರ್ನಾಟಕ SC ಒಳಜಾತಿ ವಿವಾಹ ಸಹಾಯ ಯೋಜನೆಯು | ಕರ್ನಾಟಕ | |
4 | ಕರ್ನಾಟಕ ಪರಿಶಿಷ್ಟ ಪಂಗಡ ಮದುವೆ ಸಹಾಯ ಯೋಜನ | ಕರ್ನಾಟಕ | |
5 | ಕರ್ನಾಟಕ ST ಅಂತರ್ಜಾತಿ ಮದುವೆ ಸಹಾಯ ಯೋಜನೆ | ಕರ್ನಾಟಕ | |
6 | ಕರ್ನಾಟಕ ST ಒಳಜಾತಿ ಮದುವೆ ಸಹಾಯ ಯೋಜನ | ಕರ್ನಾಟಕ | |
7 | ಕರ್ನಾಟಕ ST ವಿಧವೆ ಮರು ವಿವಾಹ ಸಹಾಯ ಯೋಜನ | ಕರ್ನಾಟಕ |
Matching schemes for sector: Financial Assistance
Sno | CM | Scheme | Govt |
---|---|---|---|
1 | ಕರ್ನಾಟಕ SC ಒಳಜಾತಿ ವಿವಾಹ ಸಹಾಯ ಯೋಜನೆಯು | ಕರ್ನಾಟಕ | |
2 | ಕರ್ನಾಟಕ ST ಒಳಜಾತಿ ಮದುವೆ ಸಹಾಯ ಯೋಜನ | ಕರ್ನಾಟಕ | |
3 | ಕರ್ನಾಟಕ ST ವಿಧವೆ ಮರು ವಿವಾಹ ಸಹಾಯ ಯೋಜನ | ಕರ್ನಾಟಕ | |
4 | ಕರ್ನಾಟಕ ಯುವನಿಧಿ ಯೋಜನ | ಕರ್ನಾಟಕ | |
5 | Karnataka Stipend to LAW Graduates Scheme | ಕರ್ನಾಟಕ |
Subscribe to Our Scheme
×
Stay updated with the latest information about ಕರ್ನಾಟಕ ಪರಿಶಿಷ್ಟ ಜಾತಿ ವಿವಾಹ ಸಹಾಯ ಯೋಜನೆ
Comments
Marriage
Merriage
Add new comment